!!ಶ್ರೀ ಸಾರಂಗಧರೇಶ್ವರಾಯ ನಮ: !!
ॐॐॐॐॐ
"ಶ್ರೀ ಸಾರಂಗಧರೇಶ್ವರ ಚರಿತ್ರೆ
°°°°°°°°°°°°°°°°°°°°°°°°°°°°°°°°°°°°°
ಒಂದಾನೊಂದು ಕಾಲದಲ್ಲಿ ವೆಂಗಿ ದೇಶದ ರಾಜಧಾನಿಯು ರಾಜಮಂಡರಿಯಾಗಿತ್ತು.ಆ ರಾಜ ಮಂಡರಿಯಲ್ಲಿ "ರಾಜ ರಾಜ ನರೇಂದ್ರ"ನೆಂಬ ರಾಜನು ಆಳ್ವಿಕೆ ಮಾಡುತ್ತಿದ್ದನು.ಆ ರಾಜ ರಾಜ ನರೇಂದ್ರನಿಗೆ "ಸಾರಂಗಧರ"ನೆಂಬ ಮಗನಿದ್ದನು.ಹಾಗೂ ಆ ರಾಜನಿಗೆ "ಚಿತ್ರಾಂಗಿ"ಎಂಬ ಎರಡನೇ ಪತ್ನಿಯೂ ಸಹ ಇದ್ದಳು.ಆ ಚಿತ್ರಾಂಗಿಗೂ ಒಬ್ಬ ಮಗನಿದ್ದನು.ಅವನ ಹೆಸರು "ವಿಜಯಾದಿತ್ಯ"ಎಂಬುದಾಗಿತ್ತು.
ಒಂದು ದಿನ ಚಿತ್ರಾಂಗಿಯು ಸಾರಂಗಧರನನ್ನು ಹಬ್ಬದೂಟಕ್ಕೆಂದು ಆಹ್ವಾನಿಸಿದ್ದಳು.ಆದರೆ 'ಸಾರಂಗಧರ'ನು ಚಿತ್ರಾಂಗಿಯ ಮಾತನ್ನು ಕಡೆಗಣಿಸಿ ಬೇಟೆಗೆ ಹೋಗಿದ್ದನು.ಆಗ ಚಿತ್ರಾಂಗಿಗೆ ಬಹಳ ಕೋಪ ಬಂದಿತ್ತು.ತನ್ನ ಮಗನಾದ ವಿಜಯಾದಿತ್ಯನಿಗೆ , ಸಾರಂಗಧರನನ್ನು ನನ್ನ ಸಮೀಪ ಅಭಿಮುಖವಾಗಿ ಕರೆದುಕೊಂಡು ಬಾ ಎಂದು ಹೇಳಿದಳು.
ಚಿತ್ರಾಂಗಿಯ ಮಗನಾದ ವಿಜಯುದಿತ್ಯನು ತುಂಬಾ ಬುದ್ಧಿಶಾಲಿಯಾಗಿದ್ದನು.ಸಾರಂಗಧರನೇ ಮೊದಲ ಮಗನಾದ ಕಾರಣ ರಾಜನ ಸಿಂಹಾಸನಕ್ಕೆ ಅಧಿಪತಿಯಾಗುವುದನ್ನು ವಿಜಯಾದಿತ್ಯನಿಗೆ ಬಹಳ ನೋವಿನ ಸಂಗತಿಯಾಗಿತ್ತು.ಅದನ್ನು ಹೇಗಾದರೂ ಮಾಡಿ ತಪ್ಪಿಸಬೇಕೆಂದು ನಿರ್ಧಾರ ಮಾಡಿ. ವಿಜಯಾದಿತ್ಯನು ಒಂದು ಅಸಹ್ಯವಾದ ಕೆಟ್ಟ ವಿಷಯವನ್ನು ಸೃಷ್ಟಿಸಿ,ರಾಜ ರಾಜ ನರೇಂದ್ರನಿಗೆ ಹೇಳುತ್ತಾನೆ.ಅದೇನೆಂದರೆ 'ನನ್ನ ತಾಯಿ ಚಿತ್ರಾಂಗಿಗೂ ಮತ್ತು ಸಾರಂಗಧರನಿಗೂ ಆಕ್ರಮ ಸಂಬಂಧವಿದೆ ಎಂದು'ಆಗ ತದೇಕ ಚಿತ್ತದಲ್ಲಿ ರಾಜ ರಾಜ ನರೇಂದ್ರನು ಆ ವಿಷಯವನ್ನು ಕೂಲಂಕುಷವಾಗಿ ವಿಚಾರಿಸದೇ ಅವಸರದಲ್ಲಿ 'ಸಾರಂಗಧರನ ಎರಡೂ ಕೈಗಳು ಮತ್ತು ಕಾಲುಗಳನ್ನು ತೆಗೆಯಲು ತನ್ನ ಸೇವಕರಿಗೆ ಆಜ್ಞೆಯನ್ನು ಮಾಡುತ್ತಾನೆ.
ಆಗ ರಾಜ ರಾಜ ನರೇಂದ್ರನ ಸೇವಕರು ಸಾರಂಗಧರನನ್ನು ಪರ್ವತದ ಬಳಿ ಕರೆದುಕೊಂಡು ಹೋಗಿ , ರಾಜನು ಆಜ್ಞೆ ಮಾಡಿದಂತೆ ಸೇವಕರು 'ಸಾರಂಗಧರನ ಎರಡೂ ಕೈಗಳನ್ನು ಮತ್ತು ಕಾಲುಗಳನ್ನು ಕತ್ತರಿಸಿ ಹಾಕುತ್ತಾರೆ.ಸೇವಕರು ಸಾರಂಗಧರನನ್ನು ಅಲ್ಲಿಯೇ ಬಿಟ್ಟು ಮರಳಿ ರಾಜನ ಬಳಿ ಹೋಗುತ್ತಾರೆ.ಪರ್ವತದಲ್ಲೇ ಉಳಿದ ಸಾರಂಗಧರನು ಎರಡೂ ಕೈಗಳು ಮತ್ತು ಕಾಲುಗಳಿಲ್ಲದೆ ನರಳಿ ಒದ್ದಾಡುತ್ತಿರುತ್ತಾನೆ.ಆ ಸಂದರ್ಭದಲ್ಲಿ ಶಿವನ ಭಕ್ತನಾದ 'ಮೇಗನಾಧ' ಎಂಬುವವನು ಸಾರಂಗಧರನಿದ್ದಲ್ಲಿಗೆ ಬಂದು,ಸಾರಂಗಧರನೇ ನೀನು ಹಿಂದಿನ ಜನ್ಮದಲ್ಲಿ ಮಾಡಿದ ಪಾಪದ ಫಲವಾಗಿ ನಿನಗೆ ಈ ಶಿಕ್ಷೆ ಬಂದಿದೆ.ನೀನು ಇದನ್ನು ಅನುಭವಿಸಲೇಬೇಕು.ನೀನು ಶಿವನನ್ನು ಕುರಿತು ಪ್ರಾರ್ಥನೆ ಮಾಡು ಎಲ್ಲಾ ಪಾಪ ಕರ್ಮಗಳು ದೂರವಾಗಿ ಒಳ್ಳೆಯದಾಗುತ್ತೆ ಎಂದು ಹೇಳಿ ಹೊರಟು ಹೋಗುತ್ತಾರೆ.
ಆಗ ಸಾರಂಗಧರನು ಶಿವನ ಭಕ್ತನಾದ ಮೇಗನಾಧನು ಹೇಳಿದಂತೆ ಶಿವನ ಪ್ರಾರ್ಥನೆಯಲ್ಲಿ ತೊಡಗುತ್ತಾನೆ.
ಸಾರಂಗಧರನ ಭಕ್ತಿಗೆ ಶಿವನು ಮೆಚ್ಚಿ ಸಾರಂಗಧರನು ಕಳೆದುಕೊಂಡಿದ್ದ ಎರಡೂ ಕೈಗಳನ್ನು ಮತ್ತು ಕಾಲುಗಳನ್ನು ಕೊಡುತ್ತಾನೆ,ಹಾಗೆಯೇ ಸುಂದರವಾದ ದೇಹವನ್ನೂ ಕೊಡುತ್ತಾನೆ.ಸಾರಂಗಧರನನ್ನೂ ಆಶಿರ್ವದಿಸಿ ಶಿವನು ಅಲ್ಲಿಂದ ಮಾಯವಾಗುತ್ತಾನೆ.
ನಂತರ ಸಾರಂಗಧರನು ಮರಳಿ ರಾಜ ರಾಜ ನರೇಂದ್ರನ ಆಸ್ತಾನಕ್ಕೆ ಬರುತ್ತಾನೆ.ಸಾರಂಗಧರನ ಸುಂದರವಾದ ದೇಹವನ್ನು ನೋಡಿದ ಕೂಡಲೇ ರಾಜ ರಾಜ ನರೇಂದ್ರನು ದಿಗ್ಭ್ರಾಂತನಾಗುತ್ತಾನೆ.
ರಾಜ ರಾಜ ನರೇಂದ್ರನು ಸಾರಂಗಧರನನ್ನು ಮದುವೆ ಮಾಡಬೇಕೆಂದು ನಿರ್ಣಯಿಸಿ ಸಾರಂಗಧರನ ಬಳಿ ಮದುವೆಯ ವಿಷಯದ ಬಗ್ಗೆ ವಿಚಾರಿಸುವಾಗ ಸಾರಂಗಧರನು ನಾನು ಮದುವೆಯಾಗುವುದಿಲ್ಲ ವೆಂಬುವುದಾಗಿ ತಿಳಿಸಿ ಸನ್ಯಾಸಿ ಸ್ವೀಕಾರ ಮಾಡುತ್ತೇನೆಂದು ರಾಜನ ಅರಮನೆಯನ್ನು ತೊರೆದು ರಾಜಮಂಡರಿಯಲ್ಲೇ ಒಂದು ದೇವಸ್ಥಾನವನ್ನು ನಿರ್ಮಿಸಿಸುತ್ತಾನೆ,ಆ ಅದ್ಭುತವಾದ ದೇವಸ್ಥಾನಕ್ಕೆ "ಶ್ರೀ ಸಾರಂಗಧರೇಶ್ವರ ಸ್ವಾಮಿ" ದೇವಾಲಯವೆಂದು ಹೆಸರಿಡುತ್ತಾರೆ.
ಶ್ರೀ ಸಾರಂಗಧರೇಶ್ವರ ಸ್ವಾಮಿಯವರು ದೇವಾಲಯದಲ್ಲಿ ಶಿವನ ಧ್ಯಾನ ಮಾಡುತ್ತ,ಭಕ್ತರ ಕಷ್ಟಗಳನ್ನು ಪರಿಹರಿಸುತ್ತ ಜಗತ್ತಿನಲ್ಲಿ ಚರಿತ್ರೆಯನ್ನೇ ಸೃಷ್ಟಿಸಿದರು.
(ಶ್ರೀ ಸಾರಂಗಧರೇಶ್ವರ ಮಠದ ಪೂಜ್ಯ ಪ್ರಶಾಂತ ದೇವರ ಕೃಪೆ)